Home / Kannada

Kannada

ನಿಮ್ಮ ಸೌಂದರ್ಯ ನಿಮ್ಮ ಕೈಯಲ್ಲಿ…

ಮನುಷ್ಯನಿಗೆ ಪ್ರಕೃತಿಯನ್ನು ದೇವರು ಹೇಗೆ ವರವಾಗಿ ಕೊಟ್ಟಿದ್ದಾನೋ, ಹಾಗೇ ಪ್ರತೀ ಮನುಷ್ಯನಿಗೆ ಸೌಂದರ್ಯವನ್ನು ಕೂಡ ವರದಾನವಾಗಿ ಕೊಟ್ಟಿದ್ದಾನೆ. ಸೌಂದರ್ಯದಲ್ಲಿ ನಾವು ಪ್ರಮುಖವಾಗಿ ಬಾಹ್ಯ ಸೌಂದರ್ಯ ಹಾಗೂ ಆಂತರಿಕ ಸೌಂದರ್ಯ ಎನ್ನುವ ಎರಡು ವಿಧವನ್ನು ಗುರುತಿಸಬಹುದು. ಈ ಆಂತರಿಕ ಸೌಂದರ್ಯ ಎನ್ನುವಂತಹದ್ದು ನಮ್ಮ ಅಂತರಾಳದ ಸೌಂದರ್ಯ, ಎಂದರೆ ನಮ್ಮ ಒಳ್ಳೆಯ ಮನಸ್ಸು, ಕಷ್ಟ ಎಂದಾಗ ಸಹಾಯಕ್ಕೆ ಬರುವ ಗುಣ, ಮಾನವೀಯತೆ ಆದರೆ ಬಾಹ್ಯ ಸೌಂದರ್ಯವೆಂದರೆ ನಮ್ಮ ದೇಹದಲ್ಲಿನ ಚರ್ಮದ ಬಣ್ಣ. ಈ …

Read More »

ಕಿಡ್ನಿಯ ಕಲ್ಲು: ಏನೇನಿದೆ ಮದ್ದು..?

ಚಳಿಗಾಲ ಮುಗಿದು ಬೇಸಿಗೆಕಾಲ ಆರಂಭವಾಗಿದೆ, ಇನ್ನೂ ಬೇಸಿಗೆಯ ಆರಂಭದ ದಿನಗಳಲ್ಲೇ ಸೂರ್ಯನ ಪ್ರಖರ ಬಿಸಿಲಿನಿಂದಾಗಿ ಜನ ಕಂಗೆಟ್ಟುಹೋಗಿದ್ದಾರೆ. ಬೆವರು ಧಾರೆಯಾಗಿ ಇಳಿದ ಹಾಗೆ ಜನ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ಸುಲಭವಾಗಿ ತುತ್ತಾಗುವ ಸಮಸ್ಯೆ ಕಿಡ್ನಿಯ ಕಲ್ಲು. ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಕಿಡ್ನಿಯ ಕಲ್ಲಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಕಳವಳ ವ್ಯಕ್ತಪಡಿಸಿದೆ. ದೇಹದ ಪ್ರಮುಖ ಅಂಗವಾಗಿರುವ ಕಿಡ್ನಿ ದೇಹದಲ್ಲಿರುವ ವಿಷಕಾರಿ …

Read More »

ಹೈಪರ್ ಆ್ಯಸಿಡಿಟಿಗೆ ಮದ್ದು ಬೂದುಗುಂಬಳಕಾಯಿ ಪುದೀನಾ ರಸ

ಸಮಸ್ಯೆಯನ್ನು ನಿವಾರಿಸಲು ಔಷಧಿಗಳಿಗೆ ನೀವು ಮೊರೆಹೋಗಬೇಕಾಗಿಲ್ಲ. ಮನೆಯಲ್ಲೇ ಬೂದುಗುಂಬಳಕಾಯಿ ಪುದೀನಾ ರಸ ಮಾಡಿ ಸೇವಿಸಿದರೆ ಆಮ್ಲ ಪಿತ್ತ ಕಡಿಮೆಯಾಗುತ್ತದೆ. ಬೇಕಾಗುವ ಸಾಮಾಗ್ರಿಗಳು ಬಿಳಿ ಬೂದುಗುಂಬಳಕಾಯಿ – 1 ತುಂಡು ಜೀರಿಗೆ ಪುಡಿ -1 ಚಮಚ ಧನಿಯಾ ಪುಡಿ – 1 ಚಮಚ ಚಾಟ್ ಮಸಾಲ- 1/4ಚಮಚ ಪುದೀನಾ ಸೊಪ್ಪು- 15 ಎಲೆ ಚಕ್ಕೆ ಪುಡಿ – 1 ಚಿಟಿಕೆ ಕಾಳುಮೆಣಸಿನ ಪುಡಿ – 1 ಚಿಟಿಕೆ ಕಲ್ಲುಪ್ಪು/ ಸೈಂಧವ ಲವಣ …

Read More »

ಉರಿಮೂತ್ರವೇ..? ಸ್ಟ್ರಾಬೆರ್ರಿ ಜ್ಯೂಸ್ ಕುಡಿಯಿರಿ..

ಇಂದಿನ ಅವಸರದ ಆಧುನಿಕ ಬದುಕಿನಲ್ಲಿ ಸುಲಭವಾಗಿ ತುತ್ತಾಗುವಂತಹ ಖಾಯಿಲೆ ಮೂತ್ರನಾಳದ ಸೋಂಕು. ಬೇಸಿಗೆ ಕಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸಮಸ್ಯೆ ಇದು. ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿರುವುದು, ಅತೀ ಕಡಿಮೆ ನೀರಿನ ಸೇವನೆ, ಸಾರ್ವಜನಿಕ ಶೌಚಾಲಯಗಳ ಬಳಕೆ ಮೂತ್ರನಾಳದ ಸೋಂಕಿಗೆ ಕಾರಣವಾಗಬಹುದು. ಅದರಲ್ಲೂ ಆಧುನಿಕ ಶೌಚಾಲಯದ ಬಳಕೆ ಮಹಿಳೆಯರಲ್ಲಿ ಕಂಡು ಬರುವ ಮೂತ್ರನಾಳದ ಸಮಸ್ಯೆಗೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು. ಉರಿಮೂತ್ರ, ಮೂತ್ರ ವಿಸರ್ಜನೆಯಲ್ಲಿ ರಕ್ತಸ್ರಾವ, ಹಳದಿ ಬಣ್ಣದ ಮೂತ್ರ, ಮೂತ್ರವಿಸರ್ಜನೆ ಮಾಡುವಾಗ ಉರಿ, …

Read More »

ಮಹಿಳಾ ಸಮಾನತೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

  ಆದಿಯ ಮೂಲ ಹೆಣ್ಣು. ಭಾರತೀಯ ಸಂಸ್ಕ್ರತಿಯಲ್ಲಿ ಹೆಣ್ಣಿಗೊಂದು ವಿಶೇಷವಾದ ಸ್ಥಾನಮಾನವಿರುವುದು ನಿಮಗೆಲ್ಲಾ ಗೊತ್ತಿರುವ ವಿಷಯ ಅಂತಾನೇ ಹೇಳಬಹುದು. ನಾವು ಹೆಣ್ಣಿಗೆ ಗೌರವ ಸೂಚಿಸುತ್ತಾ ಬಂದಿರುವುದು ಹೊಸದೇನಲ್ಲ ಇದು ಅನಾದಿಕಾಲದಿಂದಲೂ ಕೂಡ ಆಚರಿಸಿಕೊಂಡು ಬಂದ ಒಂದು ರೀತಿಯ ಆಚರಣೆ ಎಂದರೂ ತಪ್ಪಾಗಲಾರದು. ಸ್ತ್ರೀ ಅಥವಾ ಮಹಿಳೆ ಎನ್ನುವ ಪದವು ಸಂಸ್ಕ್ರತದ ಮೂಲವಾದರೂ ಹೆಣ್ಣು ಎನ್ನುವ ಪದ ಕನ್ನಡದ್ದಾಗಿದೆ. ಕಣ್ಣಿಗೆ ಕಾಣುವ ದೇವರು ಎಂದರೆ ತಾಯೀ ತಾನೇ ಎನ್ನುವ ಹಾಡು ನೀವೆಲ್ಲಾ …

Read More »

ಮೂತ್ರಕೋಶದ ಸಮಸ್ಯೆ ನಿವಾರಿಸುವ ಬೂದುಗುಂಬಳ

ತಂಪುಗುಣವುಳ್ಳಂತಹ ಬೂದುಗುಂಬಳ ಬೇಸಿಗೆಕಾಲದಲ್ಲಿ ಕಂಡುಬರುವಂತಹ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ. ಸಿಹಿತಿಂಡಿ, ಅಡುಗೆಗೆ ಮಾತ್ರವಲ್ಲದೇ ಔಷಧಿಯನ್ನಾಗಿಯೂ ಬೂದುಗುಂಬಳಕಾಯಿಯನ್ನು ಬಳಸಲಾಗುತ್ತದೆ. ವಿವಿಧ ಪೋಷಕಾಂಶ ಹಾಗೂ ಔಷಧೀಯ ಗುಣಗಳಿರುವ ಬೂದುಗುಂಬಳಕಾಯಿಯ ಬೀಜ ಹಾಗೂ ತಿರುಳಿನಲ್ಲಿ ಆರೋಗ್ಯವನ್ನು ಹೆಚ್ಚಿಸುವ ಗುಣಗಳಿವೆ. ಬೂದುಗುಂಬಳಕಾಯಿ ಸೇವನೆ ಉರಿಮೂತ್ರ, ಪಾಂಡುರೋಗ, ಜ್ವರ, ರಕ್ತವಾಂತಿ, ಅಜೀರ್ಣ, ಕಿಡ್ನಿಯಲ್ಲಿನ ಕಲ್ಲು, ರಕ್ತಭೇದಿಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ದೇಹದ ಕೊಬ್ಬನ್ನು ಕರಗಿಸಲು ಬೂದುಕುಂಬಳಕಾಯಿ ಸೇವನೆ ಉತ್ತಮ. ಕುಂಬಳಕಾಯಿ ಬೀಜಗಳಿಂದ ತಯಾರಿಸಲಾಗುವ ಎಣ್ಣೆಯು ರಕ್ತನಾಳ …

Read More »

ಮೊಡವೆಗೆ ಮದ್ದು ದಾಳಿಂಬೆ

ಮೊಡವೆ ಹೆಣ್ಣಿಗೆ ಒಡವೆ ಎನ್ನುತ್ತಾರೆ. ಆದರೆ ಮೊಡವೆ ಇರೋ ಹುಡುಗಿಯರ ವೇದನೆ ಅವರಿಗೆ ಮಾತ್ರ ಗೊತ್ತು. ಈಗೀಗ ಮೊಡವೆ ಯುವತಿಯರಲ್ಲಿ ಮಾತ್ರವಲ್ಲದೇ ಯುವಕರಲ್ಲೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಹಾರ ಮತ್ತು ಜೀವನಶೈಲಿ. ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಹಾರ್ಮೋನ್ ವ್ಯತ್ಯಾಸವೂ ಕೂಡಾ ಮೊಡವೆಗೆ ಕಾರಣವಾಗಬಹುದು. ಕೀವು, ನೋವು ತುಂಬಿಕೊಂಡು ಮನಸ್ಸಿಗೆ ಕಿರಿಕಿರಿಯುಂಟು ಮಾಡುವ ಮೊಡವೆಯನ್ನು ನಿವಾರಿಸಲು ಮನೆಮದ್ದನ್ನು ಮಾಡಬಹುದು ಇಲ್ಲಿದೆ ಸಿಂಪಲ್ ಮನೆಮದ್ದು • ಜಾಯಿಕಾಯಿ, ಕಾಳುಮೆಣಸು, ಶ್ರೀಗಂಧವನ್ನು …

Read More »

ಆರೋಗ್ಯಕರ ಜೀವನ ಶೈಲಿಗೆ ಸೂರ್ಯನಮಸ್ಕಾರದ ೧೨ ಸೂತ್ರಗಳು

ಜೀವ, ಜೀವನ, ಆರೋಗ್ಯ ದೇವರು ಕೊಟ್ಟ ಪ್ರಸಾದವಾಗಿರಬಹುದು, ಆದರೆ ಉತ್ತಮವಾದ ಜೀವನವನ್ನು ರೂಪಿಸಿಕೊಂಡು ಜೀವನದಲ್ಲಿ ಸಾಧನೆಯನ್ನ ಗೇಯಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಈ ಜೀವ ಆರೋಗ್ಯಕರವಾಗಿದ್ದರೆ ಮಾತ್ರ ಜೀವನದಲ್ಲಿ ಏನನ್ನಾದರು ಸಾಧಿಸಲು ಸಾಧ್ಯ. ಆದರೆ ನಮ್ಮದು ಆಧುನಿಕ ಜೀವನ ಶೈಲಿ, ಎಲ್ಲಾ ಕೆಲಸ ಬೇಗ ಬೇಗ ಆಗಬೇಕು. 4 ಜಿ ಜನರೇಷನ್ ಎಲ್ಲಾ ನಮಗೆ ಫಾಸ್ಟಾಗಿ, ಸ್ವಲ್ಪಾನೂ ಬಾಡಿ ಬೆಂಡಾಗದ ಹಾಗೇ ಎಲ್ಲಾನೂ ಕಾಲು ಹತ್ತಿರ ಬಂದು ಬೀಳಬೇಕು ಅನ್ನೋ ಮನಸ್ಥಿತಿಯಿಂದ …

Read More »